ಪರಿಚಯ
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಅನೇಕ ಕಾಲೇಜುಗಳ ಅಸ್ತಿತ್ವದಲ್ಲಿ ಬಂದಿದ್ದು, 1984-85 ನೇ ವಾರ್ಷಿಕ ವರ್ಷದಲ್ಲಿ ಒಟ್ಟಿಗೆ ಮೂರು ಪ್ರೌಢ ಶಾಲೆಗಳು ಪ್ರಾರಂಭಗೊಂಡವು. ಆ ಮೂರು ಶಾಲೆಗಳಲ್ಲಿ ನಮ್ಮ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢ ಶಾಲೆಯು ಒಂದಾಗಿರುತ್ತದೆ. ಕನ್ಯಾ ಪ್ರೌಢ ಶಾಲೆಯು ಕೇವಲ 3 ವಿದ್ಯಾರ್ಥಿನಿಯರಿಂದ ದಾಖಲಾತಿಗೊಂಡು ಈಗ ಸುಮಾರು 200 ವಿದ್ಯಾರ್ಥಿನಿಯರು ಎಂಟು, ಒಂಬತ್ತು ಮತ್ತು ಹತ್ತನೇಯ ತರಗತಿಗಳಿಗೆ ಪ್ರವೇಶ ಪಡೆದಿರುತ್ತಾರೆ. ಶಾಲೆಯಲ್ಲಿ ಅನುಭವ ಮತ್ತು ತರಬೇತಿ ಪಡೆದ ಶಿಕ್ಷಕಿಯರು ಒಳ್ಳೆ ನಿμÉ್ಠಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿನಿಯರಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ಕೊಡಲಾಗಿದೆ. ನಮ್ಮ ಶಾಲಾ ವಿದ್ಯಾರ್ಥಿನಿಯರು ಆಟೋಟಗಳಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ, ಚಿತ್ರಕಲೆಯಲ್ಲಿ, ಸಾಮಾನ್ಯ ಜ್ಞಾನದಲ್ಲಿ ಭಾಗವಹಿಸಿ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. ನಮ್ಮ ವಿದ್ಯಾರ್ಥಿನಿಯರು ಕರ್ನಾಟಕ ಸರಕಾರದವರು ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಿದ್ದಾರೆ. ನಮ್ಮ ವಿದ್ಯಾರ್ಥಿನಿಯರು ಸರಕಾರದ ಹಂತದಲ್ಲಿ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೂ, ಸಂಸ್ಥೆಗೂ ಹೆಸರು ತಂದಿರುತ್ತಾರೆ ಎಂದು ಹೆಮ್ಮೆಯಿಂದ ಹೇಳಲು ಇಚ್ಛಿಸುತ್ತೇನೆ. ಇದಕ್ಕೆಲ್ಲಾ ಶಾಲಾ ಮುಖ್ಯ ಗಉರುಗಳಾದ ಶ್ರೀಮತಿ ಕಮಲಾ. ಎಸ್. ಬಿರಾದಾರರವರು ಎಲ್ಲಾ ಶಿಕ್ಷಕಿಯರು, ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಆಡಳಿತಾಧಿಕಾರಿಗಳು ಕಾರಣೀಭೂತರಾಗಿರುತ್ತಾರೆ ಎಂದು ಹೇಳಬಹಸುತ್ತೇನೆ. ಇಂತಿ ಧನ್ಯವಾದಗಳೊಂದಿಗೆ ಈ ಒಂದು ವರದಿಯನ್ನು ತಮ್ಮ ಕಾರ್ಯಾಲಯಕ್ಕೆ ಸಲ್ಲಿಸುತ್ತಿದ್ದೇನೆ.