HKE Society's Girls High School, Kalaburagi

An institute of
H. K. E. Society, Kalaburagi

☰ MENU

About School

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಅನೇಕ ಕಾಲೇಜುಗಳ ಅಸ್ತಿತ್ವದಲ್ಲಿ ಬಂದಿದ್ದು, 1984-85 ನೇ ವಾರ್ಷಿಕ ವರ್ಷದಲ್ಲಿ ಒಟ್ಟಿಗೆ ಮೂರು ಪ್ರೌಢ ಶಾಲೆಗಳು ಪ್ರಾರಂಭಗೊಂಡವು. ಆ ಮೂರು ಶಾಲೆಗಳಲ್ಲಿ ನಮ್ಮ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢ ಶಾಲೆಯು ಒಂದಾಗಿರುತ್ತದೆ. ಕನ್ಯಾ ಪ್ರೌಢ ಶಾಲೆಯು ಕೇವಲ 3 ವಿದ್ಯಾರ್ಥಿನಿಯರಿಂದ ದಾಖಲಾತಿಗೊಂಡು ಈಗ ಸುಮಾರು 200 ವಿದ್ಯಾರ್ಥಿನಿಯರು ಎಂಟು, ಒಂಬತ್ತು ಮತ್ತು ಹತ್ತನೇಯ ತರಗತಿಗಳಿಗೆ ಪ್ರವೇಶ ಪಡೆದಿರುತ್ತಾರೆ. ಶಾಲೆಯಲ್ಲಿ ಅನುಭವ ಮತ್ತು ತರಬೇತಿ ಪಡೆದ ಶಿಕ್ಷಕಿಯರು ಒಳ್ಳೆ ನಿμÉ್ಠಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿನಿಯರಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ಕೊಡಲಾಗಿದೆ. ನಮ್ಮ ಶಾಲಾ ವಿದ್ಯಾರ್ಥಿನಿಯರು ಆಟೋಟಗಳಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ, ಚಿತ್ರಕಲೆಯಲ್ಲಿ, ಸಾಮಾನ್ಯ ಜ್ಞಾನದಲ್ಲಿ ಭಾಗವಹಿಸಿ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. ನಮ್ಮ ವಿದ್ಯಾರ್ಥಿನಿಯರು ಕರ್ನಾಟಕ ಸರಕಾರದವರು ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಮ್ಮ ಕೌಶಲ್ಯತೆಯನ್ನು ಪ್ರದರ್ಶಿಸಿದ್ದಾರೆ. ನಮ್ಮ ವಿದ್ಯಾರ್ಥಿನಿಯರು ಸರಕಾರದ ಹಂತದಲ್ಲಿ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲೆಗೂ, ಸಂಸ್ಥೆಗೂ ಹೆಸರು ತಂದಿರುತ್ತಾರೆ ಎಂದು ಹೆಮ್ಮೆಯಿಂದ ಹೇಳಲು ಇಚ್ಛಿಸುತ್ತೇನೆ. ಇದಕ್ಕೆಲ್ಲಾ ಶಾಲಾ ಮುಖ್ಯ ಗಉರುಗಳಾದ ಶ್ರೀಮತಿ ಕಮಲಾ. ಎಸ್. ಬಿರಾದಾರರವರು ಎಲ್ಲಾ ಶಿಕ್ಷಕಿಯರು, ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಆಡಳಿತಾಧಿಕಾರಿಗಳು ಕಾರಣೀಭೂತರಾಗಿರುತ್ತಾರೆ ಎಂದು ಹೇಳಬಹಸುತ್ತೇನೆ. ಇಂತಿ ಧನ್ಯವಾದಗಳೊಂದಿಗೆ ಈ ಒಂದು ವರದಿಯನ್ನು ತಮ್ಮ ಕಾರ್ಯಾಲಯಕ್ಕೆ ಸಲ್ಲಿಸುತ್ತಿದ್ದೇನೆ.

1984-95 ನೇ ಸಾಲಿನಲ್ಲಿ ಡಾ. ಬಿ.ಜಿ. ಜವಳಿಯವರ ಅಧ್ಯಕ್ಷತಾ ಅವಧಿಯಲ್ಲಿ ಮೂರು ಪ್ರೌಢ ಶಾಲೆಗಳು ಪ್ರಾರಂಭಗೊಂಡವು. ಅವುಗಳಲ್ಲಿ ನಮ್ಮ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢ ಶಾಲೆಯು ಒಂದು. ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ 14 ಆಗಿತ್ತು. ಅ ಅವದಿಯಲ್ಲಿ ಶ್ರೀಮತಿ ಕಮಲಾ.ಎಸ್. ಬಿರಾದಾರ ಅವರು ಪ್ರಭಾವಿ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶ್ರೀಮತಿ ಬೋರಮ್ಮಾ.ಜ. ಪಟ್ಟಣ, ಶ್ರೀಮತಿ ನೀಲಮ್ಮಾ ಅ. ಬಿರಾದಾರ ಅವರು ಸ. ಶಿಕ್ಷಕಿಯರಾಗಿ ಮತ್ತು ಶ್ರೀಮತಿ ಶ್ರೀದೇವಿ ಮತ್ತು ಶ್ರೀಮತಿ ಅರುಣಾ ದೇವಿಯವರು ಗುಮಾಸ್ತರಾಗಿ ಮತ್ತು ಶ್ರೀ ರವಿ. ಘಂಟಿ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಾರಂಭದಲ್ಲಿ ಶಾಲೆಯು ಈಗಿರುವ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಛೇರಿಯಲ್ಲಿ ನಡೆಸಲಾಯಿತು. 1986-87 ರಿಂದ 1999 ರ ವರೆಗೆ ಕನ್ಯಾ ಪ್ರೌಢ ಶಾಲೆಯು ಎಸ್.ಎಸ್.ಎಲ್. ಲಾ ಕಾಲೇಜಿನಲ್ಲಿ ನಡೆಸಲಾಯಿತು. 1987 ರಲ್ಲಿ ಪೂಜ್ಯ ಬಸವರಾಜಪ್ಪಾ ಅಪ್ಪಾ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಶಾಲೆಗೆ ಬೇಕಾಗುವ ಶಿಕ್ಷಕಿಯರ ನೇಮಕಾತಿ ಮಾಡಲಾಯಿತು. 1988 ಮಾರ್ಚ ತಿಂಗಳಲ್ಲಿ ಹೈ.ಕ. ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢ ಶಾಲೆಯ ಸ್ವಂತ ಕಟ್ಟಡದ ಉದ್ಘಾಟನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ರಾಮಲಿಂಗಂ ರವರ ಸಮ್ಮುಖದಲ್ಲಿ ಪೂಜ್ಯ ಬಸವರಾಜಪ್ಪಾ ಅಪ್ಪಾ ಅವರ ಅಧ್ಯಕ್ಷತೆಯ ಆಡಳಿತದಲ್ಲಿ ನೆರವೇರಿಸಲಾಯಿತು.

2000-2001 ನೇ ಸಾಲಿನಿಂದ ಕನ್ಯಾ ಪ್ರೌಢ ಶಾಲೆಯ ಡಾ. ಬಿ.ಜಿ. ಜವಳಿಯವರ ಅಧ್ಯಕ್ಷತೆಯ ಆಡಳಿತಾವಧಿಯಲ್ಲಿ, ಕನ್ಯಾ ಪ್ರೌಢ ಶಾಲೆಗೆ ನಿರ್ಮಾಣಗೊಂಡ ಕಟ್ಟಡದಲ್ಲಿ ನಡೆಸುತ್ತಾ ಬಂದಿದ್ದೇವೆ. ಶಾಲಾ ಬೋಧಕರ ನೇಮಕಾತಿ ಅನುಮೋದನೆ ಆಗಿ 2001 ನೇ ಮಾರ್ಚ ತಿಂಗಳಿನಲ್ಲಿ ಶಾಲೆಯು ವೇತನಾನುದಾನಕ್ಕೆ ಒಳಪಟ್ಟಿದೆ. ಎಲ್ಲಾ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಇಲಾಖೆಯಿಂದ ಹಾಗೂ ಸಂಸ್ಥೆಯಿಂದ ಮೂಲಭೂತ ಸೌಲಭ್ಯವನ್ನು ಪಡೆದಿರುತ್ತಾರೆ. ಶಾಲೆಯಲ್ಲಿ ಒಟ್ಟು 12 ಕೋಠಡಿಗಳು ಇದ್ದು, 8ನೇ, 9ನೇ ಮತ್ತು 10 ನೇ ಮೂರು ತರಗತಿ ಕೋಠಡಿಗಳು, ಮುಖ್ಯ ಗುರುಗಳ ಕೋಠಡಿ ಪ್ರಯೋಗಾಟಲಯ ಕೋಠಡಿ, ಆಟದ ಸಾಮಗ್ರಿಗಳ ಕೋಠಡ ಲಭ್ಯವಾಗಿರುತ್ತವೆ. ವಿದ್ಯಾರ್ಥಿನಿಯರಿಗೂ ಸಹ ಸರಕಾರದಿಂದ ಬರತಕ್ಕ ಸೌಲಭ್ಯಗಳಾದ, ಎಸ್.ಸಿ., ಎಸ್. ಟಿ. ವಿದ್ಯಾರ್ಥಿ ವೇತನ, ಉಚಿತ ಪುಸ್ತಕಗಳ ಸೌಲಭ್ಯ, ಬಿಸಿ ಊಟದ ಸೌಲಬ್ಯ ದೊರಕಿದೆ. ಶಾಲೆಯಲ್ಲಿ ತರಬೇತಿ ಪಡೆದ, ಹೆಚ್ಚಿನ ಜ್ಞಾನ ಉಳ್ಳ ಶಿಕ್ಷಕಿಯರಿರುತ್ತಾರೆ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಾಧನೆಗೈದಿದ್ದಾರೆ. ಪ್ರಸಕ್ತ ವರ್ಷದ ಸಾಲಿನಲ್ಲಿ ಒಟ್ಟು 149 ವಿದ್ಯಾರ್ಥಿನಿಯರು ವಿದ್ಯಾರ್ಜನೆ ಮಾಡುತ್ತಿದ್ದಾರೆ.

 

ಶಂಕುಸ್ಥಾಪನೆ - ಶಾಲಾ ಮಾಹಿತಿ

1 ಶಾಲೆಯ ಹೆಸರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢ ಶಾಲೆ, ಗುಲಬರ್ಗಾ.
2 ಸ್ಥಾಪನೆಯ ವರ್ಷ 13-11-1984
3 ಶಾಲೆ ಸ್ಥಾಪನಾಧ್ಯಕ್ಷರು ಡಾ.ಬಿ.ಜಿ. ಜವಳಿಯವರು ಅಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಗುಲಬರ್ಗಾ
4 ಈಗಿನ ಅಧ್ಯಕ್ಷರು ಶ್ರೀ ಬಸವರಾಜ ಎಸ್. ಭೀಮಳ್ಳಿಯವರು ಅಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಗುಲಬರ್ಗಾ
5 ಶಿಕ್ಷಣ ಮಾಧ್ಯಮ ಕನ್ನಡ
6 ನಡೆಯುತ್ತಿರುವ ತರಗತಿಗಳು 8, 9 ಮತ್ತು 10ನೇ ತರಗತಿಗಳು.
7 ಮುಖ್ಯೋಪಾಧ್ಯಾಯರ ಹೆಸರು ಶ್ರೀಮತಿ ಕಮಲಾಬಾಯಿ. ಎಸ್. ಬಿರಾದಾರ.
8 ಒಟ್ಟು ಶಿಕ್ಷÀಕರು ಮತ್ತು ಹತ್ತು ಜನ ಶಿಕ್ಷಕರು, ಇಬ್ಬರು ಗುಮಾಸ್ತರು, ಸಿಬ್ಬಂದಿ ವರ್ಗ ಒಬ್ಬ ಪರಿಚಾಲಕ, ಒಬ್ಬ ಸಿಪಾ¬
9 ಪ್ರಸ್ತುತ 2008-09ನೇ ಸಾಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 149
10 ಶಾಲಾ ನಿವೇಶನ ಸ್ವಂತ ಕಟ್ಟಡ. ಐವಾನ್-ಇ-ಶಾಹಿ ಏರಿಯಾ, ಗುಲಬರ್ಗಾ